  ಮೂಲದೊಡನೆ ಪರಿಶೀಲಿಸಿ

ಅಷ್ಟಾಂಶ ಸಂಖ್ಯಾವ್ಯವಸ್ಥೆ
	8ರ ವಿವಿಧ ಘಾತಗಳ ಸರಳ ಸಂಕಲನದಿಂದ ಸಂಖ್ಯೆಗಳನ್ನು ಬರೆಯುವ ವಿಧಾನ (ಆಕ್‍ಟಲ್ ನಂಬರ್ ಸಿಸ್ಟಮ್). ಇದರಲ್ಲಿ 0 ಯಿಂದ 7ರವರೆಗಿನ ಎಂಟು ಅಂಕೆಗಳು ಮಾತ್ರ ಇವೆ. ದಶಮಾಂಶ ಪದ್ಧತಿಯ (0ಯಿಂದ 9ರವರೆಗೆ ಹತ್ತು ಅಂಕೆಗಳಿರುವ ರೂಢಿಯ ವಿಧಾನ) 8, ಅಷ್ಟಾಂಶ ಪದ್ಧತಿಯಲ್ಲಿ 10 (ಓದುವ ಕ್ರಮ ಒಂದು ಸೊನ್ನೆ) ಆಗುವುದು. 
	ದಶಮಾಂಶ ವ್ಯವಸ್ಥೆಯಿಂದ ಅಷ್ಟಾಂಶ ವ್ಯವಸ್ಥೆಗೆ ಪರಿವರ್ತನಗೊಳಿಸುವ ವಿಧಾನಕ್ಕೆ ಕೆಲವು ಉದಾಹರಣೆಗಳು :
ದಶಮಾಂಶ ವ್ಯವಸ್ಥೆ						ಅಷ್ಟಾಂಶ ವ್ಯವಸ್ಥೆ
	5      =				 		. . . 		 5
	9      =			    		. . .	           11
           16    =			    		. . .	           20
           75    =		       		. . .	          113
         123    =		      		. . .	          173
         192    =		     		. . .	          300
          679   =	       		. . .	        1247
        3079   =        		. . .	        6007	ಇತ್ಯಾದಿ.
	ಗಣಕಯಂತ್ರಗಳಲ್ಲಿ ಬಳಕೆಯಲ್ಲಿರುವ ದ್ವಯಾಂಶ ವ್ಯವಸ್ಥೆಯಲ್ಲಿ (ಬೈನರಿ ಸಿಸ್ಟಮ್) ಅಂಕೆಗಳ ದೊಡ್ಡ ದೊಡ್ಡ ಸಾಲುಗಳನ್ನು ಸರಳೀಕರಿಸಲು ಅಷ್ಟಾಂಶ ವ್ಯವಸ್ಥೆಯ ಉಪಯೋಗ ಇದೆ 
	ಅಷ್ಟಾಂಶ ವ್ಯವಸ್ಥೆಯಿಂದ ದಶಮಾಂಶವ್ಯವಸ್ಥೆಗೆ ಪರಿವರ್ತನಗೊಳಿಸುವ ವಿಧಾನಕ್ಕೆ ಕೆಲವು ಉದಾಹರಣೆಗಳು :
ಅಷ್ಟಾಂಶ ವ್ಯವಸ್ಥೆ							ದಶಮಾಂಶ ವ್ಯವಸ್ಥೆ
     7     =				  		. . .		7
         16  =			    		. . .	          14
        32   =                            		. . .	          26
      123   =	                             . . .	          83
      400   =		        	           . . .	        256
    3147   =	      	           . . .	      1639	ಇತ್ಯಾದಿ.

ಅಷ್ಟಾಂಶ ವ್ಯವಸ್ಥೆಯಲ್ಲಿ ಸಂಕಲನ ಮತ್ತು ಗುಣಾಕಾರಕ್ಕೆ ಉದಾಹರಣೆಗಳು :

			0     1      2      3     4      5      6     7
		0	0   1      2       3     4      5     6     7
		1           1     2      3       4     5       6     7   10
		2	2     3      4       5     6       7   10   11
ಸಂಕಲನ		3	3     4      5       6     7     10   11   12
		4	4     5      6       7   10     11   12   13
		5	5     6      7     10   11     12   13   14
		6	6     7    10     11   12     13   14   15
		7	7   10    11     12   13     14   15   16

		           0      1       2      3     4       5     6       7
	
		0	0    0       0     0      0      0      0       0
		1	0    1       2     3      4      5       6      7
		2	0    2       4     6     10    12    14    16
		3	0    3       6    11    14    17    22    25
ಗುಣಾಕಾರ	4	0    4      10   14    20    24    30    34  
		5	0    5     12    17    24    31   36     43
		6	0    6     14   22     30    36   44     52
		7	0    7     16   25     34   43    52     61			

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ